ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕುಟುಂಬವನ್ನು ಸಾಫ್ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಟೇಪ್ ಬಹಿರಂಗವಾಗಿದೆ. ಈ ಕುರಿತು ಈಗಾಗಲೇ ಸಂಘಟನೆ ಕಡೆಯಿಂದ ಒಂದು ದೂರು ದಾಖಲಾಗಿದ್ದು, ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಕಾನೂನು ಘಟಕದೊಂದಿಗೆ ಚರ್ಚಿಸಿ ಕಾಂಗ್ರೆಸ್ ನಾಳೆ ಡಿಜಿ ಅವರಿಗೆ ಮತ್ತೊಂದು ದೂರು ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾನುವಾರದ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೋಲುವ ಭೀತಿ ಎದುರಿಸುತ್ತಿದ್ದು, ಪ್ರಧಾನಿ ಮೋದಿಯವರಿಂದ ಹಾಗೂ ಸಿಎಂ ಬೊಮ್ಮಾಯಿಯವರ ದುರಾಡಳಿತದಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ತಂತ್ರಗಳನ್ನು ಮಾಡುತ್ತದೆ’ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Karnataka Assembly Election: ಚುನಾವಣೆಗೆ ಕೌಂಟ್ ಡೌನ್ ಶುರು: ಉದ್ಯಾನನಗರಿಯಲ್ಲಿ ಭರ್ಜರಿ ಪ್ರಚಾರ
‘ಇದೇ ಪ್ರಕರಣ ಬಿಜೆಪಿಯವರಿಗೆ ಆಗಿದ್ದರೆ ಇಷ್ಟೊತ್ತಿಗೆ ಸ್ವಯಂ ದೂರು ದಾಖಲಾಗುತ್ತಿತ್ತು. ಆದರೆ ಇಲ್ಲಿ ಕೊನೆ ಪಕ್ಷ ಅಪರಿಚಿತರ ಮೇಲಾದರೂ ದೂರು ದಾಖಲಾಗಬೇಕಿತ್ತು ಅದೂ ಆಗಿಲ್ಲ. ಖರ್ಗೆ ಹಾಗೂ ಕುಟುಂಬವನ್ನು ಯಾಕೆ ಸಾಯಿಸಬೇಕು ಎನ್ನುವುದಕ್ಕೆ ಬಿಜೆಪಿಗರು ಉತ್ತರ ಹೇಳಬೇಕು. ಇಎಸ್ಐ ಆಸ್ಪತ್ರೆ, ಕೇಂದ್ರಿಯ ವಿದ್ಯಾಲಯ ತಂದಿದ್ದಕ್ಕೆ ಸಾಯಿಸಬೇಕಾ?’ ಎಂದು ಪ್ರಶ್ನಿಸಿದ್ದರು.
‘ಪಾಪ ಬಿಜೆಪಿ ಅಭ್ಯರ್ಥಿ ಅಷ್ಟೊಂದು ಜಾಣನಲ್ಲ, ಅವನು ಇನ್ನೂ ಅಕ್ಕಿ-ಪಕ್ಕಿ ಲೆವೆಲ್ನಲ್ಲಿಯೇ ಇದ್ದಾನೆ. ಇದರ ಹಿಂದಿನ ಕಿಂಗ್ ಪಿನ್ ಬಿಜೆಪಿ ಹಾಗೂ RSS ಅದರ ಉಸ್ತುವಾರಿಯನ್ನು ರವಿಕುಮಾರ್ಗೆ ವಹಿಸಲಾಗಿದೆ. ಪಾಪ ತಾನೇ ಅಭ್ಯರ್ಥಿ ಅಂದುಕೊಂಡ ರವಿಕುಮಾರ ಎಲ್ಲಾ ಕಡೆ ಓಡಾಡಿ ಸುಸ್ತಾಗಿದ್ದಾರೆ. ಅವರು ಜೇವರ್ಗಿ ಹಾಗೂ ಚಿತ್ತಾಪುರದಲ್ಲಿ ಟಿಕೆಟ್ ಮಾರಿಕೊಂಡಿದ್ದಾರೆಂದು ಬಿಜೆಪಿಗರೇ ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲು ಅದಕ್ಕೆ ಉತ್ತರಿಸಲಿ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: Siddaramaiah: ಕಾಂಗ್ರೆಸ್ ಕಾಲದಲ್ಲಿ ಐಟಿ-ಬಿಟಿ ರಾಜಧಾನಿ, ಬಿಜೆಪಿ ಅವಧಿಯಲ್ಲಿ ಅಪರಾಧಿಗಳ ಜಗತ್ತಿನ ರಾಜಧಾನಿ - ಸಿದ್ದರಾಮಯ್ಯ
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಮಲಘಾಣ ಗ್ರಾಮಕ್ಕೆ ಭೇಟಿ ನೀಡಿ ಪ್ರಚಾರ ಸಭೆ ನಡೆಸಿದ ಪ್ರಿಯಾಂಕ್ ಖರ್ಗೆ, ‘ಖರ್ಗೆ ಹಾಗೂ ಕುಟುಂಬವನ್ನು ಸಾಫ್ ಮಾಡುತ್ತೇನೆ ಅಂತಾ ಅವನು ಹೇಳಿದ ಅಡಿಯೋ ವೈರಲ್ ಆಗಿದೆ. ನಮಗೆ ಸಾಫ್ ಮಾಡಲು ಬಂದರೆ ಮಲಘಾಣದವರು ಸುಮ್ಮನೆ ಇರುತ್ತೀರಾ?’ ಎಂದು ಪ್ರಶ್ನಿಸಿದರು. ‘ನಾನು ದಾದಾಗಿರಿ ಮಾಡಲು ಶುರು ಮಾಡಿದರೆ ಕಾಂಗ್ರೆಸ್ನವರು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ ಅಂತಾ ಮರಗೋಳದಲ್ಲಿ ಹೇಳಿದ್ದಾನಂತೆ. ಆ ಪಾರನಿಗೆ ಗೊತ್ತಿರಲಿ ಚಿತ್ತಾಪುರದ ಈ ಮೊಮ್ಮಗ ಇನ್ನೂ ಜೀವಂತವಾಗಿದ್ದಾನೆ. ನಾನು ಗೆದ್ದು ಬಂದ ಮೇಲೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದವರಿಗೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗವವರಿಗೆ ಜೈಲ್ಗೆ ಕಳಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
‘ಬಿಜೆಪಿ ಅಭ್ಯರ್ಥಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾನೆ. ಢಾಬಾ, ಜೈಲು ಹಾಗೂ ಬೇಲು ಅಂತಾ ಅಲೆದಾಡಬೇಕಾದರೆ ಮಣಿಕಂಠನಿಗೆ ಮತ ಹಾಕಿ ನಿಮಗೆ ಶಿಕ್ಷಣ, ಉದ್ಯೋಗ ಹಾಗೂ ನೆಮ್ಮದಿಯ ಜೀವನ ಬೇಕಾದರೆ ನನಗೆ ಮತ ನೀಡಿ’ ಎಂದು ಮನವಿ ಮಾಡಿಕೊಂಡರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.